ಫೋ​ಟೊ ಗ್ಯಾಲರಿ


ನಾವು ಆಚರಿಸಿದ ಎಲ್ಲಾ ಹಬ್ಬಹರಿ ದಿನಗಳ ಛಾಯಚಿತ್ರಗಳೂ ಇಲ್ಲಿ ಇವೆ.ಸಿಹಿಸಿಹಿ ನೆನಪು ಸಾವಿರ ನೆನಪುಗಳು........


ಆತ್ಮೀಯ ಸ್ನೇಹಿತರೆ,
ನಿಮಗೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಈ ವಿಶೇಷವಾದ ಕರ್ನಾಟಕದ ದಿನದಂದು, SKK  ವತಿಇಂದ ವಿಶೇಷ ಸಿಹಿ ಸುದ್ದಿ ಹಂಚಲು ಬಯಸುತ್ತೇವೆ. SKK 2013 ರಲ್ಲಿ ಆರಂಭಗೊಂಡಿತು.  ಕಳೆದ 2 ವರ್ಷಗಳ ಅವಧಿಯಲ್ಲಿ, SKK 30 ಸದಸ್ಯರಿಂದ 60 ಕ್ಕೂ ಹೆಚ್ಚಿನ (ಅಧಿಕೃತ) ಸದಸ್ಯರಾಗಿ ಬೆಳೆದಿದೆ. 150ಕ್ಕೂ ಅಧಿಕ ಅನನ್ಯ ಕನ್ನಡಿಗರು ವಿವಿಧ SKK ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ. ಸ್ಟಾಕ್ಹೋಮ್ ನ ಹೊರಗಿನ ಊರುಗಳಿಂದ ಸದಸ್ಯರು ಬಂದು ಕಾರ್ಯಕ್ರಮವನ್ನು ಯಶಸ್ವಿಕರಿಸುವಲ್ಲಿ ಸಹಕರಿಸಿದ್ದಾರೆ.  ಇಂತಹ ಸಂಧರ್ಭದಲ್ಲಿ ಕನ್ನಡ ಕೂಟವನ್ನು ಸ್ಟಾಕ್ಹೋಮ್ ಕನ್ನಡ ಕೂಟ ವೆಂದರೆ ಸಮಂಜಸವಲ್ಲ ಅನ್ನುವುದು ನಮ್ಮಗಳ  ಅಭಿಪ್ರಾಯವಾಗಿರುತ್ತದೆ. ಆದ್ದರಿಂದ SKK ಕೋರ್ ಕಮಿಟಿಯು ಸ್ಟಾಕ್ಹೋಮ್ ಕನ್ನಡ ಕೂಟವನ್ನು
ಸ್ವೀಡನ್ ಕನ್ನಡ ಕೂಟ ಎಂದು ಮರುನಾಮಕರಣ ಮಾಡಲು ನಿರ್ಧರಿಸಿರುತ್ತೇವೆ.
ನಾವು ಎಲ್ಲಾ ಸಂಪರ್ಕಗಳ ಹೆಸರನ್ನು ಬದಲಾಯಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿರುತ್ತೇವೆ. ಅಲ್ಲಿಯವರೆಗೂ ಸ್ವೀಡನ್ ಕನ್ನಡ ಕೂಟ ಅಧಿಕೃತ (Skatteverket) ಉದ್ದೇಶಗಳಿಗಾಗಿ ಸ್ಟಾಕ್ಹೋಮ್ ಕನ್ನಡ ಕೂಟವಾಗಿ ಕಾರ್ಯ ನಿರ್ವಹಿಸುತ್ತದೆ. 
ಇಂತಿ, ಸ್ವೀಡನ್ ಕನ್ನಡ ಕೂಟ
ನವೆಂಬರ್  01, 2015


ರಿಜಿಸ್ಟರೇಶನ್


ನಾವು ಒಗ್ಗಟ್ಟಿನ ಅರ್ಥದಲ್ಲಿ ಸಂಕ್ರಾಂತಿ, ಯುಗಾದಿ, ಗಣೇಶದೀಪಾವಳಿ ಮತ್ತು ಇತರ ಭಾರತೀಯ ಹಬ್ಬಗಳನ್ನು ಆಚರಿಸುವುದು ಈ ಸಮುದಾಯದ ಗುರಿ.

  ಮುಂದಿನ ಕಾರ್ಯಕ್ರಮ........

   ಗಣೇಶ ಹಬ್ಬ 

    10 ಸೆಪ್ಟೆಂಬರ್ 11:00-17:00 ಶನಿವಾರ

     10 Sep at 11:00-17:00 Saturday 


     Click here to register...

ನಮ್ಮ ಬಗ್ಗೆ


Sweden Kannada Koota is an attempt to connect and strengthen the Kannada community in Greater Stockholm area. We aim to start this community to bring a sense of togetherness ,love and respect towards our culture by celebrating festivals.